Top 10 similar words or synonyms for holland

land    0.917853

longest    0.915958

thee    0.913281

columnist    0.912287

containing    0.912057

diego    0.911742

organism    0.911080

literary    0.910833

late    0.910416

gregorian    0.909655

Top 30 analogous words or synonyms for holland

Article Example
ಹಾಲೆಂಡ್‌ (Holland) ಪ್ಲಿನಿ ದಿ ಎಲ್ಡರ್‌ (ಹಿರಿಯರಾಗಿದ್ದ ಪ್ಲಿನಿ) (ಕ್ರಿಸ್ತ ಶಕ 23–79) ಈ ಪ್ರದೇಶವನ್ನು ಹೆಲಿನಿಯಮ್‌ ಮತ್ತು ಫ್ಲೆವೊ ಎಂದು ಉಲ್ಲೇಖಿಸಿದರು. "("inter Helinium ac Flevum")" . ರೈನ್‌ ನದಿ ಇಬ್ಭಾಗವಾಗುವ ಎರಡು ನದಿಮುಖಗಳ ಹೆಸರುಗಳಾಗಿವೆ. ಮೊದಲ ನದಿಮುಖವು ಬ್ರಿಯೆಲ್‌ ಸುತ್ತಮುತ್ತಲ ಪ್ರದೇಶದಲ್ಲಿ ಮೊಸಾದಲ್ಲಿ ನೀರನ್ನು ವಿಲೀನಗೊಳಿಸಿದರೆ, ಇನ್ನೊಂದು ಉತ್ತರದಿಕ್ಕಿನಲ್ಲಿರುವ ಕೆರೆಗಳಿಗೆ (ಇಜೆಸೆಲ್ಮೀರ್‌) ನದಿಯ ನೀರನ್ನು ಹರಿಯಬಿಡಲಾಗುತ್ತದೆ. "ಹಾಲೆಂಡ್‌" ಎಂಬ ಹೆಸರು, ಮೂಲಗಳಲ್ಲಿ ಮೊದಲ ಬಾರಿಗೆ ಕ್ರಿಸ್ತಶಕ 866ರಲ್ಲಿ, ಹಾರ್ಲೆಮ್‌ ಸುತ್ತಮುತ್ತಲ ಪ್ರದೇಶಗಳಿಗಾಗಿ ಬಳಸಲಾಯಿತು. ಕ್ರಿಸ್ತಶಕ 1064ರಲ್ಲಿ ಈ ಹೆಸರನ್ನು ಇಡೀ ಕೌಂಟಿಗೇ ಬಳಸಲಾಯಿತು. ಈ ಸಮಯದಲ್ಲಿ, ಹಾಲೆಂಡ್‌ನ ವಾಸಿಗಳು ತಮ್ಮನ್ನು 'ಹಾಲೆಂಡ್‌ನವರು' (Hollanders) ಎಂದು ಕರೆದುಕೊಳ್ಳುತ್ತಿದ್ದರು. "Holland (ಹಾಲೆಂಡ್‌)" ಪದವನ್ನು ಮಧ್ಯ ಡಚ್ ಪದ "holtland (ಹೋಲ್ಟ್‌ಲೆಂಡ್‌)" ('wooded land' (ಬಹಳಷ್ಟು ಮರಗಳುಳ್ಳ ಭೂಪ್ರದೇಶ)) ಎಂಬುದರಿಂದ ಪಡೆಯಲಾಗಿದೆ. ಈ ಕಾಗುಣಿತದಲ್ಲಿನ ವ್ಯತ್ಯಾಸವು ಸುಮಾರು 14ನೆಯ ಶತಮಾನದ ತನಕ ಬಳಕೆಯಲ್ಲಿತ್ತು. ಅದೇ ವೇಳೆಗೆ ಈ ಹೆಸರು "ಹಾಲೆಂಡ್‌" ಎಂದು ಸ್ಥಿರವಾಗತೊಡಗಿತ್ತು. (ಆ ಸಮಯದಲ್ಲಿ "Hollant" ಮತ್ತು "Hollandt" ಪರ್ಯಾಯ ಕಾಗುಣಿತಗಳಾಗಿದ್ದವು). ಜನಪ್ರಿಯ, ಆದರೆ ತಪ್ಪು ಮಾಹಿತಿಯುಳ್ಳ ವ್ಯುತ್ಪತ್ತಿಶಾಸ್ತ್ರದ ಪ್ರಕಾರ, ಹಾಲೆಂಡ್‌ ಎಂಬ ಪದವು "hol land" ('hollow land' (ಖಾಲಿ[ಟೊಳ್ಳು] ಪ್ರದೇಶ)) ಇಂದ ಉದ್ಭವಿಸಿತು. ಹಾಲೆಂಡ್‌ನ ತಗ್ಗು-ಪ್ರದೇಶದ ಭೌಗೋಳಿಕ ಲಕ್ಷಣವು ಇದಕ್ಕೆ ಪ್ರೇರಣೆಯಾಗಿತ್ತು.
ಹಾಲೆಂಡ್‌ (Holland) ಆಮ್ಸ್ಟರ್ಡಾಮ್‌, ರಾಟರ್ಡಾಮ್‌ ಹಾಗೂ ದಿ ಹೇಗ್‌, ಹಾಲೆಂಡ್‌ನ ಪ್ರಮುಖ ನಗರಗಳು. ಆಮ್ಸ್ಟರ್ಡಾಮ್‌ ವಿಧ್ಯುಕ್ತವಾಗಿ ನೆದರ್ಲೆಂಡ್ಸ್‌ನ ರಾಜಧಾನಿ, ಹಾಗೂ ಬಹಳ ಪ್ರಮುಖ ನಗರವೂ ಆಗಿದೆ. ರಾಟರ್ಡಾಮ್‌ ಯುರೋಪ್‌ನ ಅತಿದೊಡ್ಡ ಮತ್ತು ಅತಿ ಮುಖ್ಯ ಬಂದರು ಎನಿಸಿದೆ. ದಿ ಹೇಗ್‌ನಲ್ಲಿ ನೆದರ್ಲೆಂಡ್ಸ್‌ ದೇಶದ ಸರ್ಕಾರದ ಪ್ರಧಾನ ಕಾರ್ಯಸ್ಥಾನವಿದೆ. ಉಟ್ರೆಕ್ಟ್‌ ಮತ್ತು ಇತರೆ ಸಣ್ಣ ಸ್ಥಳೀಯ ಆಡಳಿತದ ಪ್ರದೇಶಗಳು ಸೇರಿ, ರಾಂಡ್ಸ್ಟಾಡ್‌ ಎಂಬ ಏಕೀಕೃತ ನಗರಕೂಟವಾಗಿದೆ.
ಹಾಲೆಂಡ್‌ (Holland) ರಾಂಡ್ಸ್ಟಾಡ್‌ ಪ್ರದೇಶವು ಯುರೋಪ್‌ನಲ್ಲೇ ಅತಿಹೆಚ್ಚು ಜನನಿಬಿಡತೆ ಹೊಂದಿದ್ದರೂ, ನಗರವಲಯಕ್ಕೆ ಸಂಬಂಧಿಸಿದ ಗದ್ದಲವಿಲ್ಲ. ಇಲ್ಲಿ ಕಟ್ಟುನಿಟ್ಟಾದ ವಲಯ ರಚನಾ ಕಾನೂನುಗಳಿವೆ. ಜನಸಂಖ್ಯಾ ಒತ್ತಡಗಳು ಬಹಳಷ್ಟಿವೆ, ಭೂಸ್ವತ್ತು ಬೆಲೆಗಳು ಗಗನಕ್ಕೇರುತ್ತಿವೆ, ನಿರ್ಮಿತ ಪ್ರದೇಶದ ಅಂಚುಗಳಲ್ಲಿ ಹೊಸ ವಸತಿಗೃಹ ನಿರ್ಮಾಣವು ನಿರಂತರ ಅಭಿವೃದ್ಧಿ ಸ್ಥಿತಿಯಲ್ಲಿದೆ. ಈ ಪ್ರಾಂತವು ಇನ್ನೂ ಗ್ರಾಮಾಂತರ ಪ್ರದೇಶದ ಲಕ್ಷಣವನ್ನು ಉಳಿಸಿಕೊಂಡಿರುವುದು ಅಚ್ಚರಿ ಮೂಡಿಸುವಂತಿದೆ. ಉಳಿದ ಕೃಷಿ ಭೂಮಿ ಮತ್ತು ನೈಸರ್ಗಿಕ ಸಂಪತ್ತಿನ ಪ್ರದೇಶಗಳು ಅತ್ಯಮೂಲ್ಯ ಎಂದು ಪರಿಗಣಿಸಲಾಗಿದ್ದು, ಅವುಗಳನ್ನು ಸಂರಕ್ಷಿಸಲಾಗಿದೆ. ಕೃಷಿ ಚಟುವಟಿಕೆ ನಡೆಸಬಹುದಾದ ಭೂಮಿಯ ಬಹಳಷ್ಟು ಪಾಲನ್ನು ತೋಟಗಾರಿಕೆ ಮತ್ತು ಹಸಿರುಮನೆ ಕೃಷಿ ವ್ಯವಸಾಯಗಳು ಸೇರಿದಂತೆ ಅಧಿಕ ಇಳುವರಿಯ ಕೃಷಿಗಾಗಿ ಬಳಸಲಾಗಿದೆ.
ಹಾಲೆಂಡ್‌ (Holland) ನೆದರ್ಲೆಂಡ್ಸ್‌ನಲ್ಲಿರುವ ಪ್ರತಿಯೊಂದು ಪ್ರಾಂತಕ್ಕೂ ಬಹಳಷ್ಟು ಗಮನ ಕೊಡಬೇಕಾದಂತಹ ಗಮನಾರ್ಹ ಇತಿಹಾಸ ಹೊಂದಿದೆ. ಆದರೂ, ಕನಿಷ್ಠಪಕ್ಷ ಸ್ವಲ್ಪ ಮಟ್ಟಿಗಾದರೂ, ಹಾಲೆಂಡ್‌ನ ಇತಿಹಾಸವು ನೆದರ್ಲೆಂಡ್‌ನ ಇತಿಹಾಸವಾಗಿದೆ, ಅದೇ ರೀತಿ, ನೆದರ್ಲೆಂಡ್‌ನ ಇತಿಹಾಸವು ಹಾಲೆಂಡ್‌ನ ಇತಿಹಾಸವೂ ಆಗಿದೆ. ಇನ್ನಷ್ಟು ವಿಸ್ತೃತ ಇತಿಹಾಸಕ್ಕಾಗಿ ಹಿಸ್ಟರಿ ಆಫ್‌ ದಿ ನೆದರ್ಲೆಂಡ್ಸ್‌ ಬಗೆಗಿನ ಲೇಖನ ಓದಿ. ಇಲ್ಲಿನ ಲೇಖನವು ಹಾಲೆಂಡ್‌ಗೆ ಸಂಬಂಧಿತ ಅಂಶಗಳ ಮೇಲೆ ಕೇಂದ್ರೀಕೃತವಾಗಿದೆ ಅಥವಾ ಇಡಿಯಾಗಿ ನೆದರ್ಲೆಂಡ್ಸ್‌ ದೇಶದ ಮೇಲೆ ಹಾಲೆಂಡ್‌ ನಿರ್ವಹಿಸಿದ ಪಾತ್ರವನ್ನು ವಿವರಿಸುತ್ತದೆ.
ಹಾಲೆಂಡ್‌ (Holland) ಎಂಭತ್ತು ವರ್ಷಗಳ ಯುದ್ಧದಲ್ಲಿ ಹ್ಯಾಬ್ಸ್‌ಬರ್ಗ್ಸ್‌ ವಿರುದ್ಧ ಡಚ್‌ ಬಂಡಾಯದಲ್ಲಿ, ವಾಟರ್ಗೋಝೆನ್‌ ಎನ್ನಲಾದ ಬಂಡುಕೋರರ ಜಲಸೇನೆಯು ಬ್ರಿಲ್‌ ಪಟ್ಟಣದಲ್ಲಿ 1572ರಲ್ಲಿ ತಮ್ಮ ಮೊದಲ ಕಾಯಂ ಶಿಬಿರ ಸ್ಥಾಪಿಸಿತು. ಈ ರೀತಿ, ಇನ್ನಷ್ಟು ವಿಶಾಲವಾದ ಡಚ್‌ ಒಕ್ಕೂಟದಲ್ಲಿ ಸ್ವಯಮಾಧಿಕಾರದ ರಾಜ್ಯವಾಗಿದ್ದ ಹಾಲೆಂಡ್‌, ಬಂಡಾಯದ ಕೇಂದ್ರಬಿಂದುವಾಯಿತು. ಡಚ್‌ ಸ್ವರ್ಣ ಯುಗ ಎನ್ನಲಾದ 17ನೆಯ ಶತಮಾನದಲ್ಲಿ, ಸಂಯುಕ್ತ ಪ್ರಾಂತ್ಯಗಳ ಸಾಂಸ್ಕೃತಿಕ, ರಾಜಕೀಯ ಮತ್ತು ಆರ್ಥಿಕ ಕೇಂದ್ರವಾಯಿತು. ಈ ಸಮಯ, ಈ ದೇಶವು ವಿಶ್ವದಲ್ಲೇ ಅತಿ ಶ್ರೀಮಂತ ರಾಷ್ಟ್ರವೆನಿಸಿತು. ಸ್ಪೇಯ್ನ್‌ನ ರಾಜನನ್ನು ಕೌಂಟ್‌ ಅಫ್‌ ಹಾಲೆಂಡ್‌ ಸ್ಥಾನದಿಂದ ಕೆಳಗಿಳಿಸಿದ ನಂತರ, ಗ್ರ್ಯಾಂಡ್‌ ಪೆನ್ಷನರಿ ಅಧಿಕಾರ ವಹಿಸಿಕೊಂಡಿರುವ ರಾಜಕೀಯ ಮುಖಂಡರ ನೇತೃತ್ವದಲ್ಲಿ, ಕಾರ್ಯಕಾರಿ ಮತ್ತು ಶಾಸನಬದ್ಧ ಅಧಕಾರವು ಸ್ಟೇಟ್ಸ್‌ ಆಫ್‌ ಹಾಲೆಂಡ್‌ನೊಂದಿಗೇ ಇತ್ತು.